ನೀವು ಏನು ಕೊಡುತ್ತಿರೋ ಅದೆ ನಿಮಗೆ ಸಿಗುತ್ತದೆ

ಸಂಜೀವಿನಿ ಟ್ರಸ್ಟ್

ಸಿರವಾರ

ನಿಮ್ಮನ್ನು ಸ್ವಾಗತಿಸುತ್ತದೆ

ಕರುಣೆ ಎನ್ನುವ ಬಾಷೆ ಕಿವುಡನೂ ಕೇಳಬಲ್ಲ ಹಾಗು ಕುರುಡನೂ ಕಾಣಬಲ್ಲ

ಮಾರ್ಕ್ ಟ್ವೈನ್

ಅಂಬುಲೆನ್ಸ್

ಸಂಜೀವಿನಿ ಟ್ರಸ್ಟ್  ಅಂಬುಲೆನ್ಸ್ ಸಿರವಾರ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ಜೀವ ಉಳಿಸುವ ಸೇವೆ ಸಲ್ಲಿಸುತ್ತಿದೆ.

ನೇತ್ರ ಚಿಕಿತ್ಸೆ

ಸಂಜೀವಿನಿ ಟ್ರಸ್ಟ್ ನೇತ್ರ ಚಿಕಿತ್ಸಾ ಶಿಬಿರ ವರ್ಷದಲ್ಲಿ ಮೂರು ಬಾರಿ ಸಿರವಾರ ಮತ್ತು ಮಾನ್ವಿಯಲ್ಲಿ ನಡೆಯುತ್ತದೆ. ಈ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದವರು ಕನ್ನಡಕವನ್ನು ಪಡೆಯುತ್ತಾರೆ.

ಬಡ ರೋಗಿಗಳಿಗೆ ವೈದ್ಯಕೀಯ ಸಹಾಯ

ಸಂಜೀವಿನಿ ಟ್ರಸ್ಟ್ ತುರ್ತು ರೋಗಿಗಳಿಗೆ ಉತ್ತಮ ಆಸ್ಪತ್ರೆ, ವೈದ್ಯರನ್ನು ಹಾಗು ಆಸ್ಪತ್ರೆಗಳನ್ನು ಹುಡುಕುವಲ್ಲಿ ನೆರವಾಗುತ್ತದೆ, ಜ್ಞಾನಮಿತ್ರ ಸಂಜೀವಿನಿ ಟ್ರಸ್ಟ್ ನ ನಿರ್ದೇಶಕರು ಇವರು ಆಸ್ಪತ್ರೆಗಳ ಹೆಚ್ಚಿನ ಮಾಹಿತಿ ಹೊಂದಿದ್ದಾರೆ.

ಹೊಲಿಗೆ ತರಬೇತಿ

ಸಂಜೀವಿನಿ ಟ್ರಸ್ಟ್ ಹೋಲಿಗೆ ತರಬೇತಿಯು ಯುವತಿಯರಿಗೆ ಬಟ್ಟೆ ಹೊಲಿಯುವದನ್ನು ಕಲಿಸುತ್ತದೆ, ಪ್ರತಿ ತರಬೇತಿಯಲ್ಲಿ 10 ಜನ ವಿದ್ಯಾರ್ಥಿಗಳಿದ್ದು ಪ್ರತೀ ತರಬೇತಿ 6 ತಿಂಗಳಗಳವರೆಗೆ ನಡೆಯುತ್ತದೆ.

ಆರೋಗ್ಯ ತಪಾಸಣೆ ಶಿಬಿರ

ವರ್ಷಕ್ಕೆ ಒಂದು ಬಾರಿ ಸಂಜೀವಿನಿ ಟ್ರಸ್ಟ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸುತ್ತದೆ ಇದರಲ್ಲಿ ಜನರು ಹೃದಯ, ರಕ್ತದ ಒತ್ತಡ, ಮಧುಮೇಹ, ಕಣ್ಣಿನ ತೊಂದರೆ ಹಾಗು ಹಲ್ಲಿನ ಪರಿಕ್ಷೆಯನ್ನು ಮಾಡಿಸಿಕೊಳ್ಳಬಹುದು.

ಆರೋಗ್ಯ ಅರಿವು ಕಾರ್ಯಕ್ರಮ

ಸಂಜೀವಿನಿ ಟ್ರಸ್ಟ್ ಆರೋಗ್ಯ ಅರಿವು ಕಾರ್ಯಕ್ರಮವನ್ನು ಸಿರವಾರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆಯೋಜಿಸುತ್ತಾಬಂದಿದೆ. ಇದರಲ್ಲಿ ಜನರು ಆರೋಗ್ಯಕರ ಜೀವನ ಹೇಗೆ ನಡೆಸುವುದೆಂದು ಕಲಿಯುತ್ತಾರೆ.

ಬಡವರಿಗೆ ಸಹಾಯ

ಸಂಜೀವಿನಿ ಟ್ರಸ್ಟ್ ಬಡ, ವಯಸ್ಸಾದ ಹಾಗು ಅಂಗವಿಕಲರಿಗೆ ಸಹಾಯ ಮಾಡುತ್ತಾ ಅವರ ಜೀವನ ಕಟ್ಟಿಕೊಳ್ಳುವಲ್ಲಿ ಕೈಶಲ್ಯ ತರಬೇತಿ ನೀಡಿಸುವ ಮೂಲಕ ಹಾಗು ಸಣ್ಣ ಉದ್ಯಮವನ್ನು ಪ್ರರಂಬಿಸುವಲ್ಲಿ ಸಹಕಾರಿಯಾಗಿದೆ.

ಸಾಮೂಹಿಕ ವಿವಾಹ

ಪ್ರತಿ ಕೆಲ ವರ್ಷಗಳಿಗೊಮ್ಮೆ ಸಂಜೀವಿನಿ ಟ್ರಸ್ಟ್ ಸಾಮೂಹಿಕ ವಿವಾಹವನ್ನು ಆಯೋಸಿತ್ತಾ ಬಂದಿದೆ, ಕಳೆದ ಸಾಮೂಹಿಕ ವಿವಾಹದಲ್ಲಿ 61 ಜೋಡಿ ವಿವಾಹವಾಗಿದ್ದಾರೆ, ಅದಲ್ಲದೆ ಅವರು ತಮ್ಮ ವಿವಾಹ ಜೀವನವನ್ನು ಸಾಲದಿಂದ ಅಥವ ಹೆಚ್ಚಿನ ಖರ್ಚಿಲ್ಲದೆ ಪ್ರರಂಬಿಸಬಹುದು.

ಅನುಸರಿಸಿ
  • Facebook Social Icon
  • YouTube Social  Icon
ಸಂರ್ಪಕ
+91 9945448147
ವಿಳಾಸ
ಸಿರವಾರ, ಕರ್ನಾಟಕ, 584129, ಭಾರತ