• Gnanmithra

ಕ್ಯಾನ್ಸರ್ ಅರಿವು ಕಾರ್ಯಕ್ರಮ

ಸಂಜೀವಿನಿ ಟ್ರಸ್ಟ್ ಕ್ಯಾನ್ಸರ್ ಅರಿವು ಕಾರ್ಯಕ್ರಮವನ್ನು ಫೆಬ್ರವರಿ 12 2018 ರಂದು ವಾರ್ಡ್ ನಂಬರ್ 2 ಹಾಗೂ 3ರಲ್ಲಿ ಸಿರವಾರದಲ್ಲಿ ಆಯೋಜಿಸಲಾಯಿತು. 200ಕ್ಕೂ ಹೆಚ್ಚು ಜನ ೀ ಕಾರ್ಯಕ್ರಮದಲ್ಲಿ ಬಾಗಿಯಾಗಿ ಕ್ಯಾನ್ಸರ್ ಗೆ ಕಾರಣ ಹಾಗೂ ಅದರ ಚಿಕಿತ್ಸಾ ವಿದಾನದ ಮಾಹಿತಿಯನ್ನು ತಿಳಿದುಕೊಂಡರು. ಕೃಷ್ಣ ನಾಯಕ್ ಗ್ರಾಮ ಪಂಚಾಯತಿ ಸದಸ್ಯರು ಮಾತನ್ನಾಡಿ ಸಂಜೀವಿನಿ ಟ್ರಸ್ಟ್ ಒಳ್ಳೆ ಆಸ್ಪತ್ರೆಯಂತೆ ಸಿರವಾರ ಹಾಗೂ ಸುತ್ತಮುತ್ತಳಿನ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸಿ ಸಾಕಸ್ಟು ಜನರ ಪ್ರಣ ಉಳಿಸುತ್ತಿದೆ ಎಂದು ಹೇಳಿದರು.

ಡಾ|| ನಿಂಗೆ ಗೌಡ ಕ್ಯಾನ್ಸರ್ ತಜ್ಞರು ಕಿದ್ವಾಯಿ ಆಸ್ಪತ್ರೆ ಬೆಂಗಳೂರು ಇವರು ಕ್ಯಾನ್ಸರ್ ಅರಿವಿನ ವೀಡಿಯೋ ನಮಗೆ ಒದಗಿಸಿದರು. ಈ ವೀಡಿಯೋದಲ್ಲಿ ಸ್ತನ ಕ್ಯಾನ್ಸರ್ ಎಂದರೇನು ಅದನ್ನು ತಡೆಗಟ್ಟುವ ವಿದಾನ ಹಾಗೂ ಅದನ್ನು ಮೊದಲನೇ ಅಂತದಲ್ಲಿ ಕಂಡುಹಿಡಿಯುವುದು ಹೇಗೆ ಎಂದು ತಿಳಿಸುತ್ತದೆ ಹಾಗೂ ಅದರ ಜೊತೆಗೆ ಕ್ಯಾನ್ಸರ್ ನ ಚಿಕಿತ್ಸೆಯ ಬಗ್ಗೆಯೂ ಮಾಹಿತಿ ತಿಳಿಸಿ ಕೊಡುತ್ತದೆ.

ಜನರು ಕ್ಯಾನ್ಸರ್ ನ್ನು ಮೊದಲ ಹಂತದಲ್ಲಿ ಪತ್ತೆಹಚ್ಚುವ ವಿದಾನ ಹಾಗೂ ಅದರ ಲಕ್ಷಣಗಳನ್ನು ತಿಳಿದರು ಹಾಗೂ ಅದರಿಂದ ಗುಣಮುಕವಾಗುವದರಬಗ್ಗೆಯೂ ಮಾಹಿತಿ ಪಡೆದರು. ಮಹಿಳೆಯರು ತಮ್ಮಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಬಗ್ಗೆ ಮಾಹಿತಿ ಪಡೆದರು ಹಾಗೂ ಜನರು ಕ್ಯಾನ್ಸರ್ ಗೆ ಮುಖ್ಯ ಕಾರಣ ತಿಳಿದರು ಹಾಗೂ ದೂಮಪಾನ ಬಾಯಿಯ ಕ್ಯಾನ್ಸರ್ ಹಾಗೂ ಶ್ವಾಶಕೋಶ ಕ್ಯಾನ್ಸರ್ ಗೆ ಹೇಗೆ ಮುಖ್ಯ ಕಾರಣವಾಗುತ್ತದೆ ಎಂದು ತಿಳಿದರು.

ಕ್ಯಾನ್ಸರ್ ಒಂದು ಮಹಾಮಾರಿ ರೋಗ ಇದನ್ನು ಮೊದಲ ಹಂತದಲ್ಲಿ ಪತ್ತೆಹಚ್ಚದಿದ್ದಲ್ಲಿ ಜೀವವನ್ನೇ ಬಲಿಪಡೆಯುತ್ತದೆ. ಅದರಿಂದ ಸಂಜೀವಿನಿ ಟ್ರಸ್ಟ್ ಕ್ಯಾನ್ಸರ್ ಅರಿವು ಕಾರ್ಯಕ್ರಮದಿಂದ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ರೋಗ ಬಂದಮೇಲೆ ಚಿಕಿತ್ಸೆ ಪಡೆಯುವುದಕಿಂತ ರೋಗ ಬರದಹಾಗೆ ನೋಡಿಕೊಳ್ಳುವುದು ಸೂಕ್ತ ಎಂದು ಈ ಕಾರ್ಯ ನಿರ್ವಹಿಸುತ್ತಿದೆ.

4 views
ಅನುಸರಿಸಿ
  • Facebook Social Icon
  • YouTube Social  Icon
ಸಂರ್ಪಕ
+91 9945448147
ವಿಳಾಸ
ಸಿರವಾರ, ಕರ್ನಾಟಕ, 584129, ಭಾರತ